A crow was sitting on a tree, doing nothing all day. A small rabbit noticed the crow, and asked,
“Can I sit like you and do nothing all day long?”
The crow answered, “Sure, why not.”
So the rabbit sat on the ground below the crow and rested.
All of a sudden a fox appeared, jumped on the rabbit, [...]
Archive for the ‘Uncategorized’ Category
Posted in Uncategorized on Thursday,March 1, 2007 | Leave a Comment »
ಎಳ್ಳಿನ ಚಟ್ನೆ
Posted in Uncategorized on Thursday,March 1, 2007 | 1 Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಎಳ್ಳು, ಹುರಿಗಡಲೆ, ಕೊಬ್ಬರಿ, ಒಣಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಉಪ್ಪು, ಬೆಳ್ಳುಳ್ಳಿ.ತಯಾರಿಕಾ ವಿಧಾನ
ಎಳ್ಳನ್ನು ಚೆನ್ನಾಗಿ ಹಸನು ಮಾಡಿ ಹುರಿದಿಟ್ಟುಕೊಳ್ಳಿ, ನಂತರ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಒರಳಿನಲ್ಲಿ ಹಾಕಿ ರುಬ್ಬಿಟ್ಟುಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪನ್ನು ಬೆರಸಿ ಸಣ್ಣಗಾಗುವವರೆಗೂ ರುಬ್ಬಿ ರೊಟ್ಟಿಯೊಡನೆ ರುಚಿಯನ್ನು ಸವಿಯಲು ನೀಡಿರಿ.
ಹಿರೇಕಾಯಿ ಪಲ್ಯ
Posted in Uncategorized on Thursday,March 1, 2007 | 1 Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಎರಡು ಹೀರೆಕಾಯಿ, ನಾಲ್ಕು ಹಸಿಮೆಣಸಿನಕಾಯಿ, ಉಪ್ಪು, ತೆಂಗಿನ ಕಾಯಿ ಕೊಬ್ಬರಿ, ಜೀರಿಗೆ, ಸಾಸಿವೆ, ಕರಿಬೇವು.
ತಯಾರಿಕಾ ವಿಧಾನ
ಹೀರೆಕಾಯಿಯ ಸಿಪ್ಪೆಯನ್ನು ತೆಗೆದು ಸಣ್ಣಗೆ ಹರಚಿಟ್ಟುಕೊಳ್ಳಿ, ಉಪ್ಪು ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ರುಬ್ಬಿಟ್ಟುಕೊಂಡು,, ಬಾಣಲೆಯಲ್ಲಿ ಒಗ್ಗರಣೆಗೆ ಇಟ್ಟು ಜೀರಿಗೆ, ಸಾಸಿವೆ ಕರಿಬೇವು, ಹಾಕಿದ ಮೇಲೆ ರುಬ್ಬಿಟ್ಟುಕೊಂಡಿದ್ದನ್ನು ಆ ಒಗ್ಗರಣೆಗೆ ಬೆರಸಿ, ಹೆಚ್ಚಿಟ್ಟುಕೊಂಡ ಹೀರೆಕಾಯಿಯನ್ನು ಹಾಕಿ ಚೆನ್ನಾಗಿ ಕುದಿಸಿ ಒಲೆಯ ಮೇಲಿಂದ ಕೆಳಗಿಳಿಸಿ.
ಹುರಳಿಕಾಳು ಸಾರು
Posted in Uncategorized on Thursday,March 1, 2007 | Leave a Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಅರ್ಧ ಕೆ.ಜಿ. ಹುರಳಿಕಾಳು, 10 ಒಣಮೆಣಸಿನಕಾಯಿ, ತೆಂಗಿನ ಕಾಯಿ ಕೊಬ್ಬರಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಹುಣಸೇ ಹಣ್ಣು, ಸಾಸಿವೆ, ಎಣ್ಣೆ ತುಪ್ಪ.
ತಯಾರಿಕಾ ವಿಧಾನ
ಹುರಳಿಯಕಾಳುಗಳನ್ನು ಮೊದಲು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೇಯಿಸಬೇಕು, ಇನ್ನೊಂದೆಡೆ ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ, ತೆಂಗಿನ ಕೊಬ್ಬರಿಯನ್ನು ಹಾಕಿ ಒರಳಿನಲ್ಲಿ ರುಬ್ಬಬೇಕು, ರುಬ್ಬಿದ ಮಸಾಲೆಯನ್ನು ಬೆಂದ ಹುರಳಿಗೆ ಸೇರಿಸಿ ಚೆನ್ನಾಗಿ ಕಲಕಿ ಹುಣಸೆಹಣ್ಣನ್ನು ಹಿಂಡಿ ರಸವನ್ನು ಹಾಕಿ, ಉಪ್ಪನ್ನು ಬೆರಸಿ, ಚೆನ್ನಾಗಿ ಕುದಿಸಬೇಕು, ಕುದ್ದ ಸಾರಿಗೆ ಒಗ್ಗರಣೆ ಹಾಕಿ ಪಾತ್ರೆಯನ್ನು ಕೆಳಗಿಳಿಸಿ.
ಪೂರಿ
Posted in Uncategorized on Thursday,March 1, 2007 | Leave a Comment »
ತಯಾರಿಕೆಗೆ ಬೇಕಾಗುವ ಪದಾರ್ಥಗಳು
ಅರ್ಧ ಕೆ.ಜಿ. ಗೋಧಿ ಹಿಟ್ಟು, ಸ್ವಲ್ಪ ಮೈದಾ ಹಿಟ್ಟು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಕಾ ವಿಧಾನ
ಗೋಧಿ ಹಿಟ್ಟನ್ನು ಮೊದಲು ಸಾಣಿಸಿ ಇಟ್ಟುಕೊಳ್ಳಬೇಕು, ನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಗೋಧಿಹಿಟ್ಟು ಮತ್ತು ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಬೇಕು, ಕಲಸಿದ ನಂತರ ಚಪಾತಿಯನ್ನು ಲಟ್ಟಿಸುವ ಮಣೆಯ ಮೇಲೆ ಗುಂಡಾಗಿ ಲಟ್ಟಸಿ, ಒಲೆಯ ಮೇಲೆ ಬಾಣಲೆಯನ್ನಿಟ್ಟು ಎಣ್ಣೆ ಚೆನ್ನಾಗಿ ಕಾದ ನಂತರ ಅದರಲ್ಲಿ ಒಂದೊಂದಾಗಿ ಕರಿಯಲು ಬಿಡಿ, ಸ್ವಲ್ಪ ಕಂದು ಬಣ್ಣ ಬರುವವರೆಗೂ ಕರಿದ [...]
ಈರುಳ್ಳಿ ಗೊಜ್ಜು
Posted in Uncategorized on Thursday,March 1, 2007 | Leave a Comment »
ತಯಾರಿಸಲು ಬೇಕಾಗುವ ಪದಾರ್ಥಗಳುಅರ್ಧ ಕೆ. ಜಿ. ಈರುಳ್ಳಿ, ಹುಣಸೆಹಣ್ಣು, ಉಪ್ಪು, ಮೆಣಸಿನ ಕಾಯಿಯ ಖಾರ, ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಮತ್ತು ಅರ್ಧ ಉಡೆ ಬೆಲ್ಲ.
ತಯಾರಿಸುವ ವಿಧಾನ
ಈರುಳ್ಳಿಯನ್ನು ಮೊದಲು ಚೆನ್ನಾಗಿ ಹೆಚ್ಚಿಡಬೇಕು, ಓಲೆಯ ಮೇಲಿನ ಪಾತ್ರೆಯಲ್ಲಿ ಎಣ್ಣೆ ಹಾಕಿಟ್ಟುಕೊಂಡು ಕಾದ ನಂತರ ಸಾಸಿವೆ, ಜೀರಿಗೆಯನ್ನು ಹಾಕಿ ಚೆನ್ನಾಗಿ ಕಲಕಿಸಿ ನಂತರ ಒಣಮೆಣಸಿನಕಾಯಿಯ ಚೂರಿಗಳನ್ನು ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿಯಬೇಕು. ಹುಣಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಅದರ ಹುಳಿಯನ್ನು ಹಾಕಿ, ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ [...]
ಉದ್ದಿನಬೆಳೆ ಚಟ್ನೆ
Posted in Uncategorized on Thursday,March 1, 2007 | Leave a Comment »
ತಯಾರಿಸಲು ಬೇಕಾಗುವ ಪದಾರ್ಥಗಳುಉದ್ದಿನ ಬೆಳೆ-2ಚಮಚ, ಕೊತ್ತಂಬರಿ ಸೊಪ್ಪು, ಐದು ಹಸಿ ಮೆಣಸಿನಕಾಯಿ, ಕಡಲೆಬೆಳೆ-2ಚಮಚ, ಅರ್ಧ ತೆಂಗಿನ ಕಾಯಿಯ ತುರಿ, ಎಣ್ಣೆ ಉಪ್ಪು.
ತಯಾರಿಸುವ ವಿಧಾನ
ಮೊದಲು ಕಡಲೆ ಬೆಳೆಯನ್ನು ಹುರಿದು, ತೆಂಗು ಹಾಗೂ ಹಸಿ ಮೆಣಸಿನಕಾಯಿಗಳನ್ನು ಚೆನ್ನಾಗಿ ರುಬ್ಬಿ, ಆಗಲೇ ಉಪ್ಪು, ಸಾಸಿವೆ, ಉದ್ದಿನಬೆಳೆ ಕಡಲೆ ಬೆಳೆ ಹುರಿದು ರುಬ್ಬಿದ ಮಸಾಲೆ ಪದಾರ್ಥಕ್ಕೆ ಸೇರಿಸಿರಿ, ಅದನ್ನು ಚೆನ್ನಾಗಿ ಕಲಕಿಸಿ, ಅದಕ್ಕೆ ಕೊಸಂಬರಿ ಸಪ್ಪನ್ನು ಮೇಲೆ ಹಾಕಿರಿ.
ರಾಗಿ ರೊಟ್ಟೆ
Posted in Uncategorized on Thursday,March 1, 2007 | Leave a Comment »
ತಯಾರಿಸಲು ಬೇಕಾಗುವ ಪದಾರ್ಥಗಳುರಾಗಿ ಹಿಟ್ಟು, ಸ್ವಲ್ಪ ಉಪ್ಪು
ತಯಾರುವ ವಿಧಾನ
ರಾಗಿ ಹಿಟ್ಟನ್ನು ಮೊದಲು ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಚೆನ್ನಾಗಿ ಕಲಸಿ ಸ್ವಲ್ಪ ಉಪ್ಪನ್ನು ಬೆರಸಿ, ಅಕ್ಕಿರೊಟ್ಟಿಯನ್ನು ತಯಾರಿಸುವಂತೆ ರಾಗಿ ರೊಟ್ಟಿಯನ್ನು ತಯಾರಿಸಬೇಕು, ರಾಗಿ ರೊಟ್ಟಿಯೊಂದಿಗೆ ಬೆಣ್ಣೆಯನ್ನು ಸವಿಯಲು ಕೊಡಿರಿ ತುಂಬಾ ಚೆನ್ನಾಗಿರುತ್ತದೆ.
ಸಕ್ಕರೆ ಪೊಂಗಲ್
Posted in Uncategorized on Thursday,March 1, 2007 | Leave a Comment »
ತಯಾರಿಸಲು ಬೇಕಾಗುವ ಪದಾರ್ಥಗಳುಒಂದು ಕೆ ಜಿ ಅಕ್ಕಿ, ಸಕ್ಕರೆ, ಸ್ವಲ್ಪ ಕೊಬ್ಬರಿ, ಗೊಡಂಬಿ, ದ್ರಾಕ್ಷಿ, ಏಲಕ್ಕಿ, ಕಾಲು ಕೆ ಜಿ ತುಪ್ಪ.
ತಯಾರಿಸುವ ವಿಧಾನ
ಮೊದಲು ಅನ್ನವನ್ನು ಮಾಡಿಟ್ಟಕೊಳ್ಳಿ, ಅನ್ನ ಒಲೆಯ ಮೇಲಿರುವಾಗಲೇ ಅದಕ್ಕೆ ಸಕ್ಕರೆ ಮತ್ತು ತುಪ್ಪವನ್ನು ಸುರಿದು ಅನ್ನ ಗಟ್ಟಿಯಾಗುವವರೆಗೂ ಕಲಕಿಸಿರಿ, ಆನಂತರ ದ್ರಾಕ್ಷಿ ಗೊಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಂಡು ಅನ್ನಕ್ಕೆ ಹಾಕಿ, ಜೋತೆಗೆ ಏಲಕ್ಕಿ ಪುಡಿ, ತುರಿದ ಕೊಬ್ಬರಿಯನ್ನು ಸೇರಿಸಿ ಆಗ ಸಕ್ಕರೆ ಪೊಂಗಲ್ ರೆಡಿ.
ಮಾವಿನಕಯಿ ತುರಿ ಅನ್ನ
Posted in Uncategorized on Thursday,March 1, 2007 | Leave a Comment »
ಮಾಡಲು ಬೇಕಾಗುವ ಪದಾರ್ಥಗಳು
ನಾಲ್ಕು ಮಾವಿನ ಕಾಯಿಗಳು, ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು, ಅಕ್ಕಿ.
ತಯಾರಿಸುವ ವಿಧಾನ
ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ಅನ್ನವನ್ನು ಮಾಡಿಟ್ಟುಕೊಳ್ಳಬೇಕು, ನಂತರ ಮಾವಿನ ಕಾಯಿಗಳನ್ನು ಕೊಬ್ಬರಿ ತುರಿದಂತೆ ತುರಿಯಬೇಕು ಅನ್ನಕ್ಕೆ ಒಗ್ಗರಣೆ ಹಾಕಿ, ನಂತರ ಆ ಅನ್ನದ ಮೇಲೆ ಈ ಮಾವಿನ ತುರಿಯನ್ನು ಹಾಕಿ ರುಚಿಯನ್ನು ಸವಿಯಲು ಕೊಡಿರಿ.