| ಬಾಳಿನ ಅರ್ಥ |
| ಏರಿದೆ ಗಗನಕೆ ಬೆಲೆಯು ಇಲ್ಲವು ಬಾಳಿಗೆ ನೆಲೆಯುಹೆಚ್ಚಿದೆ ಬೆಲೆ ಎಲ್ಲದಕೂ ಮುದುಡಿದೆ ಮನುಜನ ಬದುಕು ಕಾಲಿಗೆ ಎಳೆದರೆ ತಲೆ ಕಡೆ ಬಾರದು ತಲೆ ಕಡೆ ಎಳೆದರೆ ಕಾಲದು ಮುಚ್ಚದುಹಾಸಿಗೆ ಇದ್ದಷ್ಟು ಕಾಲನು ಚಾಚು ಎಂದರು ಹಿರಿಯರು ನೀತಿಯ ಮಾತು ಹಾಸಿಗೆ ಎಂಬುದೆ ಇಲ್ಲದೆ ಹೋದರೆ ಎಲ್ಲಿಗೆ ಚಾಚಲಿ ಕಾಲನು ಸೋತು ಎಲ್ಲೆಡೆ ತುಂಬಿದೆ ಕಳ್ಳರ ಸಂತೆ ಜೀವನ ಮಟ್ಟವು ಎಲ್ಲೆಡೆ ಕುಸಿದಿದೆ ಮುಳ್ಳದು ನಾಡಿನ ಏಳಿಗೆಗೆ ಉದಿಸಲಿ ತಮವನು ಕಳಿಯುವ ಸೂರ್ಯ ಸಮತಾಭಾವವು ಮೂಡಲಿ ಮನದಲಿ |
Thursday,March 1, 2007 by manjunathbhat